Tuesday, December 19, 2017

XI Edict










ಅಶೋಕನ ಶಿಲಾಶಾಸನ 


ದೇವನಾಂ ಪ್ರಿಯ, ಪ್ರಿಯದರ್ಶಿ ಮಹರಾಜನು ಹೀಗೆ ಹೇಳುವನು,
 ಜನರು ಅನೇಕಹಬ್ಬಗಳನ್ನು ಆಚರಣೆಗಳನ್ನು ಮಾಡುವರು. ಅನಾರೋಗ್ಯವದಾಗ,ಮಗು ಹುಟ್ಟಿದಾಗ, ಮಕ್ಕಳ ಮದುವೆಯಲ್ಲಿ,ಪ್ರವಾಸ ಪ್ರಾರಂಭಿಸುವಾಗ ಇದೇ ಮೊದಲಾದ ಸಂದರ್ಭಗಳಲ್ಲಿ  ಆಚರಣೆಗಳಿವೆ.ವಿಶೇಷವಾಗಿ ಹೆಂಗಸರು ಅರ್ಥ ಹೀನ ಮತ್ತು ಉಪಯೋಗವಿಲ್ಲದ ಆಚರಣೆ ಮಾಡುವರು.ಇಂಥಹ ವ್ರತಗಳನ್ನು ಆಚರಿಸುವರು. ಇವುಗಳಿಂದ ಯಾವುದೇ ಫಲವಿಲ್ಲ.ಆಚರಣೆ ಮಾಡ ಬೇಕಾದುದು ಒಂದೇ, ಅದು ಧರ್ಮಾಚರಣೆ.ಅದು ಗುಲಾಮರು ಮತ್ತು ಸೇವಕರಲ್ಲಿ ಕಳಕಳಿ.ಗುರುಗಳಲ್ಲಿ ಗೌರವ,  ಶ್ರವಣ ಮತ್ತುಬ್ರಾಹ್ಮಣರಿಗೆ ದಾನ- ಈ ವು ಮತ್ತು ಈ ರೀತಿಯ ಆಚರಣೆಗಳೇ ಧಾರ್ಮಿಕ ಆಚರಣೆಗಳು.ಆದ್ದರಿಂ ತಂದೆ, ಮಗ, ಸೋದರ,ಯಜಮಾನ,, ಸ್ನೇಹಿತ, ಪರಿಚಿತ ಮತ್ತು ನೆರೆಹೊರೆಯವ ಯೋಚಿಸಬೇಕಾದುದು ಇದು –“ ಇದೇ ಪುಣ್ಯಕರ್ಯಇದೇ ವ್ರತ, ಇದವನ್ನುಗುರಿತಲುಪವರೆಗೆ ಅನುಸರಿಸ ಬೇಕು” ( ಖಾಲ್ಸಿ ಪಾಠ)ಇಲ್ಲವಾದಲ್ಲಿ ಅವರು ತಾವೆ ಅಮದುಕೊಳ್ಳ ಬೇಕು” ಇನ್ನೆಲ್ಲ ಆಚರಣೆಗಳು ಫಲ ಅನುಮಾನ.ಅವು ಫಲ ನೀಬಹುದು , ನೀಡ ದಿರ ಬಹುದುಅವುಗಳ ಫಲ ತಾತ್ಕಾಲಿಕ, ಆದರೆ ಧಾರ್ಮಿಕ ಆಚರಣೆ  ಎಲ್ಲ ಕಾಲದಲ್‌ಊ ಯಾವಾಗಲೂ ಪರಿಣಾಮಕಾರಿಈ ಜನ್ಮದಲ್ಲಿ ಫಲ ದೊರೆಯದಿದ್ದರೆ ಮರುಜನ್ದಲ್ಲಿ ದೊರೆವುದು ಅನಂತ ಭಾಗ್ಯ ಖಂಡಿತ. ಒಂದುವೇಳೆ ಇಹದಲ್ಲಿ ಸುಖ ಲಭಿಸಿದರೂಆಗ ಎರಡೂ ಕಡೆ ಲಾಭ. ಈ ಜನುಮದಲ್ಲಿ ಸುಖ ಮುಂದಿನಜನ್ಮ ದಲ್ಲಿ ಅನಂತಗೌರವ ವು ಧರ್ಮಾಚರಣೆಯಿಂದ ದೊರೆಯುವುದು
( ಗಿರಿನಾರ ಪಾಠ)

ಅದೂ ಅಲ್ಲದೆ, ದಾನ ಎಂಬುದು ಉತ್ತಮ.ಆದರೆಧಮಧ ದಾನಕ್ಕಿಂತ ದೊಡ್ಡದು ಬೃಎ ಇಲ್ಲಾದ್ದರಿಂದ ಸ್ನೇಹಿತ,ಸಹಚರ, ಬಂಧುಸಂಗಾತಿ  ಎಲ್ಲ ಸಂದರ್ಭದಲ್ಲೂ ಬೋಧಿಸಬೇಕು೭.” ಇದನ್ನು ಆಚರಿಸು ಇದರಿಂದ ಸ್ವರ್ಗ ದೊರೆಯುವುದು”  ಸ್ವರ್ಗಪ್ರಾಪ್ತಿಗಿಂತ ಮಿಗಿಲಾದುದು ಯಾವುದಿದೆ?

Monday, March 20, 2017

The new Indian express story



The article is about the effort to revive the Tigalari lipi on the  verge of extinction.It also highlights the effort to reach more and more people through application of  modern technology to save ancient script. .On line study of Tigalari script is catching up Fast
 Interested can contact  H.Seshagirirao,  Director of On line studies,
 \
E.mail-     hastaprati2@ gmail.com  

Mobile    -9448442323

Friday, February 24, 2017

ತಿಗಳಾರಿ ಲಿಪಿ ಆನ್‌ಲೈನ್‌ ಅಧ್ಯಯನ


             ಬಿ.ಎಂ.ಶ್ರೀಪ್ರತಿಷ್ಠಾನ. ೩ನೇಮುಖ್ಯರಸ್ತೆ,ಎನ್‌.ಆರ್.ಕಾಲನಿ,ಬೆಂಗಳೂರು-೧೯                                                              
                                           ತಿಗಳಾರಿ ಲಿಪಿ ಆನ್‌ಲೈನ್‌  ಅಧ್ಯಯನ

ವಿವರಣ ಪತ್ರಿಕೆ 
 
ತಿಗಳಾರಿ ಲಿಪಿಯು ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ  ಶತಮಾನಗಳ ಹಿಂದೆ ಸಂಸ್ಕೃತ ಮತ್ತು ಕೆಲ ಮಟ್ಟಿಗೆ ತುಳು ಭಾಷೆಯನ್ನು ಬರೆಯಲು  ಬಳಸಲಾಗುತಿದ್ದ ಬರಹ.. ಇದು ಒಂದು ರೀತಿಯಲ್ಲಿ ಗೂಢವಾದ ಲಿಪಿ. ಬಹುತೇಕ ಸಂಸ್ಕೃತವಿದ್ವಾಂಸರು ತಮ್ಮ ಮಂತ್ರ, ತಂತ್ರ ಹಾಗೂ ಸಾಹಿತ್ಯಗಳು ಅನೇಕರಿಗೆ ಅರ್ಥವಾಗಬಾರದೆಂದು ರಹಸ್ಯವಾಗಿರಿಸಬೇಕೆಂದು ಈ ಲಿಪಿ ಬಳಸಿದರೆಂದು ಹೇಳಲಾಗುವುದು. ಬಹುತೇಕ ಕೃತಿಗಳು ಮಠ, ದೇವಸ್ಥಾನ ಹಾಗೂ ಸಂಸ್ಥಾನಗಳಲ್ಲಿ ಇವೆ. ಈಗ ಅವುಗಳನ್ನು ಓದುವವರ ಸಂಖ್ಯೆಯೇ ವಿರಳವಾಗಿದೆ. ಬೆರಳೆಣಿಕೆಯಷ್ಟು ಜನರು ತಿಗಳಾರಿಯನ್ನುಅರ್ಥೈಸಬಲ್ಲರು. ಸುಮಾರು ಐದು ಸಾವಿರ ಕೃತಿಗಳು ಇವೆ. ಕೆಲವೇ ವರ್ಷಗಳಲ್ಲಿ ಅವು ಇದ್ದೂ ಇಲ್ಲದಾಗಬಹುದು.ಆದ್ದರಿಂದ ನಮ್ಮ ಪುರಾತನ ಸಾಹಿತ್ಯ ,ಸಂಸ್ಕೃತಿ ಮತ್ತು ಜ್ಞಾನವನ್ನು ಉಳಿಸಿಕೊಳ್ಳಲು ತಿಗಳಾರಿ ಬಲ್ಲ ಯುವ ಪಡೆಯನ್ನು ರೂಪಿಸವುದು ಅಗತ್ಯ. ಈ ದಿಶೆಯಲ್ಲಿ ಬಿ.ಎಂ.ಶ್ರೀ ಪ್ರತಿಷ್ಠಾನದ ಹಸ್ತಪ್ರತಿವಿಭಾಗವು ಆನ್‌ಲೈನ್‌ನಲ್ಲಿ ಕಲಿಸುವ ಯೋಜನೆ ರೂಪಿಸಿದೆ.  ಸಂಸ್ಕೃತ ಬಲ್ಲ ಮತ್ತು ತಂತ್ರಜ್ಞಾನದಲ್ಲಿ ನುರಿತವರಿದ್ದರೆ ಕಲಿಕೆಗೆ ಅನುಕೂಲ.ಅದೃಷ್ಟವಶಾತ್‌ ಸಂಸ್ಕೃತ ವಿಶ್ವವಿದ್ಯಾಯದ ಎಂ ಫಿಲ್‌ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳು ಭಾಗವಹಿಸಲು ಆಸಕ್ತರಾಗಿದ್ದಾರೆ. ಪ್ರತಿಷ್ಠಾನದಲ್ಲಿನ  ಗಣಕೀಕೃತ ತಿಗಳಾರಿ ಕೃತಿಗಳು ಬಹಳ ಉಪಯೋಗವಾಗಿವೆ.ಎಲ್ಲ ಕಲಿಕೆಯೂ ಅಂತರ್ಜಾಲದ ಮೂಲಕವೇ ಆಗುವುದು ಆಧುನಿಕ.ತಂತ್ರಜ್ಞಾನದ ಸಹಾಯದಿಂದ ಈ ಆರ್ವಾಚೀನ ಲಿಪಿಯನ್ನು ಉಳಿಸುವ ಈ ಪ್ರಯತ್ನ ದೇಶದಲ್ಲಿಯೇ ಮೊದಲನೆಯದು ಎನ್ನಬಹುದು. ಇದರ ಯಶಸ್ಸು ಅಭ್ಯರ್ಥಿಗಳ ಆಸಕ್ತಿಯನ್ನಯ ಅವಲಂಬಿಸಿದೆ. . ಈ ವಿನೂತನ  ಪ್ರಯತ್ನಕ್ಕೆ  ಎಲ್ಲ ಆಸಕ್ತರ ಬೆಂಬಲ ಬೇಕಿದೆ.

ಆಗಾಗ ಕೇಳಿಬರುವ ಪ್ರಶ್ನೆಗಳು   
೧.ಯಾರು ತಿಗಳಾರಿ ಲಿಪಿ ಕಲಿಕೆಗೆ ಅರ್ಹರು ?
 ಸಾಹಿತ್ಯ ಸಂಸ್ಕೃತಿ ಮತ್ತು ಸಂಸ್ಕೃತದಲ್ಲಿ ಆಸಕ್ತಿ ಇರುವ ಎಲ್ಲರೂ ಅರ್ಹರು.
೨. ಅಭ್ಯರ್ಥಿಗಳಿಗೆ ಯಾವ ಅರ್ಹತೆ ಅಗತ್ಯ?
ಅ.ತಂತ್ರಜ್ಞಾನದ ತಿಳುವಳಿಕೆ ಬೇಕೇ ಬೇಕು. ಅಂತ್‌ಜಾಲ, ವಾಟ್ಸ ಅಪ್‌, ಸ್ಮಾರ್ಟ    ಫೋನು ಬಳಸಲು ಪರಿಣಿತಿ ಬೇಕು ಜೊತೆಗೆ ಅವುಗಳನ್ನು ಹೊಂದಿರ ಬೇಕು ಸಂಸ್ಕೃತ ಜ್ಞಾನವಿದ್ದರೆ ಉತ್ತಮ
೩. ಕಲಿಕೆಗೆ ಏನಾದರೂ ಶುಲ್ಕವಿದೆಯಾ?
 ಬೋಧನಾ ಶುಲ್ಕ ಸದ್ಯಕ್ಕೆ   ಉಚಿತ. ( ನಿರ್ವಹಣಾವೆಚ್ಚ ಭರಿಸ ಬೇಕಾಗಬಹದು)
೪.ಕಲಿಕಾ ಅವಧಿ ಎಷ್ಟು?
ಸರಿಸುಮಾರು   ಆರುತಿಂಗಳು.
೫. ತಿಗಳಾರಿ ಕಲಿಕೆಯಿಂದ ಉಪಯೋಗ ವೇನು?
ತಿಗಳಾರಿಲಿಪಿ ಕಲಿತರೆ ಆ ಲಿಪಿಯಲ್ಲಿರುವ ಸುಮಾರು ಐದು ಸಾವಿರ ಕೃತಿಗಳ ಜ್ಞಾನದ ಅನಾವರಣ ಮಾಡಬಹುದು.
ವಿದ್ವಾಂಸರು, ಸಂಶೋಧಕರು ತಮಗೆ ಬೇಕಾದ ಮಾಹಿತಿಯನ್ನು ಮೂಲದಲ್ಲೇ ಪಡೆಯಬಹುದು.
ತಿಗಳಾರಿ ಕೃತಿಗಳನ್ನುಲಿಪ್ಯಾಂತರಿಸಿ ಪ್ರಕಟಿಸಲು ಸರ್ಕಾರದ ನೆರವು ಸಿಗುವುದು.
ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಶೋಧಕರು  ತಮ್ಮಲ್ಲಿರುವ ತಿಗಳಾರಿ ಕೃತಿಗಳಲ್ಲಿರುವ ಮಾಹಿತಿ ಅರಿಯಲು ಲಿಪ್ಯಾಂತರಿಸಲು ಹಣ ಕೊಡಬಹುದು.
 ಎಲ್ಲಕ್ಕಿಂತ ಅಜ್ಞಾತವಾಗಿ ಕಣ್ಮರೆಯಾಗಬಹುದಾದ ಲಿಪಿಯನ್ನು ಉಳಿಸುವ ಸಾರ್ಥಕ ಕಾರ್ಯದಲ್ಲಿ ಭಾಗಿಯಾಗುವ ಸಂತೃಪ್ತಿ ನಮ್ಮದಾಗುವುದು.
                                         ಪಠ್ಯ ಕ್ರಮ
ಹಂತ -೧. ವಿದ್ಯು ನ್ಮಾನ ಮಾಧ್ಯಮದ ಮೂಲಕ ಸುಗುಮ ಸಂಪರ್ಕ ಸಾಧಿಸುವುದು  ( ಇಂಟರ್ನೆಟ್‌  ,ಸ್ಮಾರ್ಟ ಫೋನ್‌, ವಾಟ್ಸ ಅಪ್, ಗೂಗಲ್‌ಡ್ರೈವ್‌ ಬಳಕೆ ಹಾಗೂ ಕನ್ನಡದಲ್ಲಿ ಟೈಪ್‌ ಮಾಡುವ ಸಾಮರ್ಥ್ಯವೃದ್ಧಿ )
ಹಂತ -೨. ಕನ್ನಡ ತಾಳೆ ಗರಿ ಬರಹಗಳನ್ನು  ಆನ್‌ಲೈನ್‌ ಮೂಲಕ ಪಡೆಯುವ ಮತ್ತು ಓದಿ ಲಿಪ್ಯಾಂತರಿಸಿ ವಾಪಸ್ಸು ಕಳುಹಿಸುವ ಪರಿಣತೆ ಗಳಿಸುವುದು
ಹಂತ -೩  ತಿಗಳಾರಿ ವರ್ಣ ಮಾಲೆಯ ಕಲಿಕೆ
ಹಂತ-೪. ಕಾಗುಣಿತದ ಕಲಿಕೆ
ಹಂತ-೫    ಒತ್ತಕ್ಷರದ ಕಲಿಕೆ
ಹಂತ-೬ ಸರಳ ಕನ್ನಡ ಮತ್ತು ಸಂಸ್ಕೃತ ಪದಗಳನ್ನು  ತಿಗಳಾರಿಲಿಪಿಯಲ್ಲಿ ಬರೆಯಲು ಕಲಿಯುವುದು. ಅದೇ ರೀತಿಯಲ್ಲಿ ತಿಗಳಾರಿಲಿಪಿಯಲ್ಲಿನ ಪದಗಳನ್ನು ಕನ್ನಡದಲ್ಲಿ ಬರೆಯುವುದನ್ನು ಕಲಿಯುವುದು.
ಹಂತ-೭- ಸರಳ ಕನ್ನಡ ಮತ್ತು ಸಂಸ್ಕೃತ ವಾಕ್ಯಗಳನ್ನು ತಿಗಳಾರಿಗೆ ಮತ್ತು ತಿಗಳಾರಿಯಲ್ಲಿನ ವಾಕ್ಯಗಳನ್ನು ಕನ್ನಡಕ್ಕೆ ಲಿಪ್ಯಾಂತರಿಸುವುದು
ಹಂತ-೮ ತಾಳೆ ಗರಿಗಳಲ್ಲಿನ ಪದಗಳನ್ನು ಗುರುತಿಸುವುದು (ಸ್ಕ್ಯಾನ್‌ ಮಾಡಿ ಕಳುಹಿಸಲಾಗುವುದು)
ಹಂತ -೯ ತಾಳೆ ಗರಿಗಳಲ್ಲಿನ ವಾಕ್ಯಗಳನ್ನು ಲಿಪ್ಯಾಂತರಿಸುವುದು (ಸ್ಕ್ಯಾನ್‌ ಮಾಡಿ ಕಳುಹಿಸಲಾಗುವುದು)
ಹಂತ ೧೦ ತಾಳಗರಿಗಳಲ್ಲಿನ ಪೂರ್ಣ ಬರಹವನ್ನು ಲಿಪ್ಯಂತರಿಸುವುದು.
ಹಂತ- ೧೧. ಪರಿಣಿತರಿರುವ  ಮೂರುದಿನ ಕಾರ್ಯಾಗಾರ
ಅವಧಿಯ ಕೊನೆಯಲ್ಲಿ ಯಾವುದಾದರೂ ಒಂದು ಕೃತಿಯ ಸಾಮೂಹಿಕ ಲಿಪ್ಯಾಂತರ
ಅಭ್ಯರ್ಥಿಗಳು ಪರಿಣಿತಿ ಸಾಧಿಸಿದರೆ ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ಆದಾಯ ತರುವ  ಕಾರ್ಯವನ್ನು ಸಂಸ್ಥೆಯ ಮೂಲಕ ಮೂಲಗಳನ್ನು ಸಂಪರ್ಕಿಸಿ  ನಮ್ಮ ಮೇಲ್ವಿಚಾರಣೆಯಲ್ಲಿ ಸಮುದಾಯ  ಲಿಪ್ಯಾಂತರ ಕೆಲಸ ನಿರ್ವಹಿಸುವ ಯೋಜನೆ ಇದೆ.
.
ಡಾ. ಪಿ.ವಿ.ನಾರಾಯಣ                                                      ಎಚ್‌.ಶೇಷಗಿರಿರಾವ್‌

ಅಧ್ಯಕ್ಷರು                                                               ಅಧ್ಯಯನ ನಿರ್ದೇಶಕರು                                                                                                                                             

 ಸಂಪರ್ಕ ವಿಳಾಸ -  ನಿರ್ದೇಶಕರು ತಿಗಳಾರಿ ಆನ್‌ಲೈನ್‌ ಅಧ್ಯಯನ ವಿಭಾಗ
   ಬಿ ಎಂ ಶ್ರೀ.ಪ್ರತಿಷ್ಠಾನ. ಬೆಂಗಳೂರು-೧೯
ಮಿಂಚಂಚೆ-    hastaprati2@Gmail.com  
ಸ್ಥಿರ- 080-266-13929 . ಚರ ದೂರವಾಣಿ- 9448442323    
               ಆಸಕ್ತರು ಆನ್‌ಲೈನ್‌ನಲ್ಲಿ ನೊಂದಾಯಿಸಿಕೊಳ್ಳಬಹುದು.  















    D£ï ¯ÉÊ£ï CzsÀåAiÀÄ£À, ºÀ¸ÀÛ ¥Àæw «¨sÁUÀ, ©.JA ²æà ¥ÀæwµÁ×£À ¨ÉAUÀ¼ÀÆgÀÄ-19

                                     £ÉÆAzÁªÀuÉ Cfð


1. ºÉ¸ÀgÀÄ                   -   
                    
2. vÀAzÉ /vÁ¬Ä ºÉ¸ÀgÀÄ     -

3 «¼Á¸À                     -    ...........................
                                 ..........................
                                   ............................

4.  zsÀÆgÀªÁt  1. ¹ÜgÀ.........................................2. ZÀgÀ.........................................

5 ªÀAiÀĸÀÄì      ........................

6. «zÁåºÀðvÉ  ...................

7.w½¢gÀĪÀ ¨sÁµÉUÀ¼ÀÄ     NzÀ®Ä --------mÉÊ¥ÀÄ ªÀiÁqÀ®Ä  ----- ªÀiÁvÀ£ÁqÀ®Ä

                     1    .................             .................             .................
                     2  ..................             ...................             ....................
                     3  ..................             .................              ................

8. CAvÀgïeÁ® §¼ÀPÉ   eÁÕ£À -      ¸ÁzsÁgÀt----   GvÀÛªÀÄ ---- CvÀÄåvÀÛªÀÄ

 ¸ÀzÁ CAvÀgï eÁ®zÀªÀÄÆ®PÀ ¸ÀAªÀºÀ£À ªÀÄvÀÄÛ  PÀgÉzÁUÀ ªÉÊAiÀÄÄQÛPÀ ¨sÉÃn  CUÀvÀå
 
                          
       ¢£ÁAPÀ                                   C¨sÀåyðAiÀÄ ¸À»



Tuesday, February 9, 2016

ಒಂದನೆಯ ಪುಲಿಕೇಶಿಯ ಬಾದಾಮಿ ಶಾಸನ -ಕ್ರಿ.ಶ.೫೪೩

o




ಪುಲಿಕೇಶಿಯ   ಬದಾಮಿ ಶಾಸನ ಕ್ರಿ.ಶ.543

ಸ್ವಸ್ತಿ ಶಕವರ್ಷೇಷು ಚತು ಶ್ವೇತೇಷು ಪಞ್ಚಷಷ್ಟಿಯುತೇಷು
ಅಶ್ವಮೇಧಾದಿ ಯಜ್ಞಾನಾಂಯಜ್ಞಾಶ್ರೌತ ವಿಧಾನತಃ
ಹಿರಣ್ಯಗರ್ಭ ಸಮ್ಭೂತಶ್ಚಲಿಕ್ಯೋವಲ್ಲಭೇಶ್ವರಃ
ಧರಾಧರೇನ್ದ್ರವಾತಾಪಿಮಜೇಯ ಮ್ಭೂತಯೇ ಭುವಃ

ಅಧಸ್ತಾದುಪರಿಷ್ಟಾಚ್ಚ ದುರ್ಗ ಸಮೇತದಚೀಕರತ್‌


     ಸ್ವ     ಸ್ತಿ ಶ  ಕ ವರ್ಷೇಷು ಚ ತು ಶ್ವೇತೇ ಷು ಪ  ಞ್ಚ ಷ ಷ್ಟಿ    ಯು ತೇ ಷು




         ಅ ಶ್ವಮೇ  ಧಾ ದಿ  ಯ ಜ್ಞಾನಾಂಯಜ್ಞಾ  ಶ್ರೌ  ತ  ವಿ ಧಾ ನ   ತಃ



            ಹಿ ರ    ಣ್ಯ    ಗ  ರ್ಭ ಸ ಮ್ಭೂ ತ ಶ್ಚ ಲಿ ಕ್ಯೋವ ಲ್ಲ ಭೇ ಶ್ವರಃ



        ಧ ರಾ ಧ  ರೇ    ನ್ದ್ರವಾತಾಪಿ   ಮ  ಜೇ    ಯ ಮ್ಭೂತ ಯೇ ಭು ವಃ




      ಅಧ ಸ್ತಾ   ಪ ರಿಷ್ಟಾಚ್ಚ ದುರ್ಗ ಸಮೇತ ದಚೀಕರತ್

  

Tuesday, November 10, 2015

ದೀಪಾವಳಿ ಶುಭಾಶಯಗಳು.



                                         

                



    
                 
 ದೀಪಾವಳಿ ನಿಮ್ಮ ಜೀವನದಲ್ಲಿ ಹೊಸ ಬೆಡಗು, ಬೆಳಕು  ಮತ್ತು ಬೆರಗನ್ನು ತರಲಿ


                               ಶೇಷಗಿರಿರಾವ್.ಎಚ್‌ 

Tuesday, June 30, 2015

ಕದಂಬ ಮಧಾಂತ ವರ್ಮನ ತಾಮ್ರಪಟ -390




 
ಸ್ವಸ್ತಿಃ ಜಿತಭಗವತಾ ವಿಜಯ್ಹೃಞ್ಗ್ಯ ಸ್ವಾಮಿ ಮಹಾಶೇನ ಮಾತೃಗಣ ನುದ್ಯಾತಾಭಿಷೇಕಾನಾಮ್ ಮಾನವ್ಯಸ  ಗೋತ್ರಾಣಾಂ ಹಾರಿತೀ ಪುತ್ರಾಣಾಂ


ಪ್ರತಕೃತ ದ್ವಾಧ್ಯಾಯ ಚರ್ಚ್ಚಾ ಪಾರಾಣಂ ಆಶ್ರೀತ ಜನಾಮ್ಭಾನಾಂ ಕದಮ್ಭಾನಾಂ  
ಅಶ್ವ ಮೇಧಾಭವೃತ ಸ್ನಾನ ಪವಿತ್ರೀಕೃತಾನ್ನಾಮಯಾನಾಂಶ್ರೀ ಕುಮಾರವರ್ಮ್ಮಮಹಾರಾಜಸ್ಯ ಪುತ್ರಃ ತ್ರಿವರ್ಗ ಸಮ್ಪನ್ನಾಃ ಮಿತರ ಕಮುದಾಗತ




Thursday, June 25, 2015

ಮೂರನೆ ಗೋವಿಂದನ ತಾಮ್ರ ಪಟ ಕ್ರಿ ಶ.- 780






    ಸ್ವಸ್ತಿಶಕ  ನೃಪ  ಕಾಳಾತೀ ತ    ಸಂವ  ತ್ಸರಂಗಳೇಏಳ್ನೂರು ಇಪ್ಪ ತ್ತಾ  ರನೆ


    ಯಾ ಸುಭಾನು ಎಮ್ಭಾ ವರ್ಷದಾ ವೈ  ಸಾಖ   ಮಾಸ ಕೃ  ಷ್ಣ ಪ






  ಕ್ಷ   ಪಞ್ಚಮಿ  ಬೃ  ಹ    ಸ್ಪತಿ       ವಾರ ಮಾಗಿ  ಸ್ವ  ಸ್ತಿ     ಪ್ರ  ಭೂ

      ತ ವ ರ್ಷ ಶ್ರೀ ಪ್ರುಥ್ವೀ   ವಲ್ಲಭ   ಮಹಾರಾಜಾಧಿ    ರಾಜ ರಾಜಪರ್ಮೇ                

   ಶ್ವರ ಗೋ ಯಿ ನ್ದರ   ಭಟಾರರಾ      ಗಾ   ಮು  ಣ್ಡ ಬ್ಬೆ  ಮ  ಹಾ  ದೇ


ವಿ ಯರಾಗಿ  ರಾಜ್ಯ   ಪ್ರವ           ರ್ದ್ದ ಮಾನ       ಕಾ   ಲ  ದೊ ಳ್                             


     ಕ ಞ್ಚಿ   ಯ   ನಾ  ಳ್ವ ದ ನ್ತಿ ಗ ನ ಮೇ   ಗೆ  ಳ್ದು ಕ  ಪ್ಪ ಗೊ  ಳ              


     ಲ್ಬ   ನ್ದ   ಲ್ಲಿ ತುಂಗಭದ್ರೆ        ಯಾ ತಡಿ  ಯೊ   ಳ್ತಾ   ಣ  ಬೀಡುಗ

  ಳಿ     ಳ್ದು ರಾ ಮೇ ಶ್ವ  ರ ಎಮ್ಭಾ  ತೀರ್ತ್ಥ  ದಾ ಮೋದೊ  ಲೊ   ಳ್ಮೆ  ಪ್ಪಿ


   ಕ್ಕಿಪೊರದಪನ್ದಿಗಳನಿರೆಯಲ್ವನ್ದಲ್ಲಿ ತೀರ್ತ್ಥದೊಳ್ಪ




ನ್ಕಣ್ಡು ಶಿವಧಾರಿ ಎಮ್ಬ ಗೊರವರ್ಗ್ಗೆ ಮುದಮ್ಬೆಯಪ
     ಮನನ್ತು ಕೀರ್ತಿವರ್ಮ್ಮೊರಾಜರಪರಮೇಶ್ವರದತ್ತಮಾನಿವಿಟ್ಟಾರ ಇ

         

Saturday, June 20, 2015

ಕನ್ನಡ ಲಿಪಿ ವಿಕಾಸ-ಶಾಸನಗಳ ಮೂಲಕ

ಕನ್ನಡ  ಲಿಪಿ ವಿಕಾಸ-ಹಲ್ಮಿಡಿ ಮೊದಲ ಶಾಸನ
ಕನ್ನಡ ಲಿಪಿಗೆ ಸುಮಾರು ಎರಡು ಸಾವಿರ ವರ್ಷದ  ಇತಿಹಾಸವಿದೆ, ಕ್ರಿಪೂ,೩ನೇ ಶತಮಾನದ ಲ್ಲಿ ದೊರೆತ ಅಶೋಕನ ಶಾಸನಗಳ ಬ್ರಾಹ್ಮಿ ಲಿಪಿಯೇ ಭಾರತದ ಬಹುತೇಕ ಭಾಷೆಗಳ ಲಿಪಿಗಳ ಮಾತೆ. ಆದರಿಂದ ಉಗಮವಾಗಿ ಇಂದಿನ ಆಧುನಿಕ ರೂಪ ಪಡೆಯಲು ಸುಮಾರು ಎರಡು ಸಹಸ್ರಮಾನಗಳೇ ಬೇಕಾದವು.ಅಶೋಕನ ಶಾಸನಗಳಿಂದ ಮೊದಲಾದ ಈ ಲಿಪಿ ವಿಕಾಸ ಯಾತ್ರೆಗೆ  ಶಾತವಾಹನ, ಕದಂಬ, ಗಂಗ , ಬಾದಾಮಿ ಚಾಲುಕ್ಯ, ರಾಷ್ಟ್ರಕೂಟ ,ಕಲ್ಯಾಣ ಚಾಲಕ್ಯ ಹೊಯ್ಸಳ ಸೇವುಣ, ಕಳಚೂರು,ವಿಜಯನಗರ ಮತ್ತು ಮೈಸೂರು ಅರಸರ ಆಳ್ವಿಕೆಯ ಕೊಡುಗೆ ಗಣನೀಯ. ಅವರುಗಳ ಕಾಲದ ಶಾಸನಗಳನ್ನು ಗಮನಿಸಿದರೆ ಇದು ತಿಳಿಯುತ್ತದೆ. ಶಾಸನಗಳ ಮೂಲಕ ಲಿಪಿ ವಿಕಾಸ ಅರಿಯುವ ಕಿರುಪ್ರಯತ್ನ  ಇದು. ಶಾಸನಗಳ ಸಾಲುಗಳನ್ನು ಆಧುನಿಕ ಕನ್ನಡದಲ್ಲಿ ನೀಡುವುದರಿಂದ ಸಾಮಾನ್ಯ ಓದುಗನಿಗೂ ಆಸಕ್ತಿ ಮೂಡಬಹುದೆಂಬ ಆಶಯವೇ ಇದರ  ಉದ್ದೇಶ. ಪ್ರಾಜ್ಞರು ಸುಧಾರಣೆಗೆ ಸಲಹೆ ಸೂಚನೆ ನೀಡಿದರೆ ಸ್ವಾಗತ.
ಹಲ್ಮಿಡಿ ಶಾಸನವು ಕನ್ನಡದಲ್ಲಿ ಈವರೆಗೆ  ದೊರೆತಿರುವ ಅತಿ  ಪ್ರಾಚೀನ  ಶಿಲಾಶಾಸನ, ಇದರ  ಕಾಲ ಕ್ರಿ.ಶ  ೪೫೦ ಇದನ್ನು ಕದಂಬ ವಂಶದ ಕಾಕುಸ್ಥವರ್ಮನ  ಅವಧಿಯಲ್ಲಿ ಕಂಡರಿಸಲಾಗಿದೆ.ಇದೊಂದು ವೀರಗಲ್ಲು. ಹಾಗೂ ದಾನ ಶಾಸನ. ಇದರ ಲಿಪಿ ಮತ್ತು ಕದಂಬರ ಸಂಕ್ರಮಣ  ಕಾಲದ್ದು.. ಇದನ್ನುಪೂರ್ವ ಹಳಗನ್ನಡ ಎನ್ನುವರು. ಈ ಶಾಸನ  ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನಿಂದ ಸುಮಾರು ೧೯ ಕಿಲೊಮೀಟರ್ ದೂರದಲ್ಲಿನ  ಹ ಲ್ಮಿಡಿ ಹೆಸರಿನ ಹಳ್ಳಿಯ ವೀರಭದ್ರದೇವರ ಗುಡಿ ಹತ್ತಿರವಿದ್ದಿತು. ಈಗ ಅಲ್ಲಿ ಅದರ ಮಾದರಿ ಇಡಲಾಗಿದೆ. ಕನ್ನಡ ಶಾಸ್ತ್ರೀಯ ಭಾಷೆಯ ಸ್ಥಾನ ಪಡೆಯಲು ಇದು ಪ್ರಬಲ ಪುರಾವೆ ಎನಿಸಿದೆ.
ಅಟಆಸಕ್ತರ ಅನುಕೂಲಕ್ಕಾಗಿ ಮೂಲಶಾಸನದ ಪ್ರತಿ ಸಾಲೂ ,ಅದರಕೆಳಗೆ ಲಿಪ್ಯಾಂತರ  ನೀಡಲಾಗಿದೆ.ಬ್ರಾಹ್ಮಿ ಅಕ್ಷರದ ಕೆಳಗೆ ಅದರ ಲಿಪ್ಯಾಂತರ ಇರುವುದರಿಂದ ಓದುಗರು ಬ್ರಾಹ್ಮಿ ಕಲಿಯಲು ಅರ್ಥೈಸಲು ಅನುಕೂಲ.ಶಾಸನದ ತಿರುಳು ನೀಡಿದೆ.


                        


ಜಯತಿ ಶ್ರೀ ಪರಿಷ್ವರ್ಙ್ಗ ಶ್ಯಾರ್ಙ್ಗ [ವ್ಯಾ]ನತಿರ್ ಅಚ್ಯುತಃ ದಾನಕ್ಷೆರ್ ಯುಗಾನ್ತಾಗ್ನಿಃ [ಶಿಷ್ಟಾನಾನ್ತು ಸುದರ್ಶನಃ ನಮಃ ಶ್ರೀಮತ್ ಕದಂಬಪನ್ ತ್ಯಾಗ ಸಂಪನ್ನನ್ ಕಲಭೋg[ನಾ] ಅರಿ ಕಕುಸ್ಥಭಟ್ಟೋರನ್ ಆಳೆ ನರಿದಾವಿ[ಳೆ] ನಾಡುಳ್ ಮೃಗೇಶನಾಗೇನ್ದ್ರಾಭೀಳರ್ ಭ್ಭಟಹರಪ್ಪೋರ್ ಶ್ರೀ ಮೃಗೇಶ ನಾಗಾಹ್ವಯರ್ ಇರ್ವ್ವರಾ ಬಟರಿ ಕುಲಾಮಲ ವ್ಯೋಮತಾರಾಧಿನಾಥನ್ ಅಳಪ ಗಣ ಪಶುಪತಿಯಾ ದಕ್ಷಿಣಾಪಥ ಬಹುಶತಹವನಾಹವದು[ಳ್] ಪಶುಪ್ರದಾನ ಶೌರ್ಯ್ಯೋದ್ಯಮ ಭರಿತೋ[ನ್ದಾನ]ಪಶುಪತಿಯೆನ್ದು ಪೊಗೞೆಪ್ಪೊಟ್ಟಣ ಪಶುಪತಿ ನಾಮಧೇಯನ್ ಆಸರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ zಸೇನ್ದ್ರಕ ಬಣೋಭಯ ದೇಶದಾ ವೀರಪುರುಷಸಮಕ್ಷದೆ ಕೇಕಯ ಪಲ್ಲವರಂ ಕಾದೆಱದು ಪೆತ್ತಜಯನಾ ವಿಜ ಅರಸಂಗೆ ಬಾಳ್ಗೞ್ಚು ಪಲ್ಮಡಿಉಂ ಮೂೞುವಳ್ಳಿಉಂ ಕೊಟ್ಟಾರ್ ಬಟಾರಿ ಕುಲದೊನಳ ಕದಂಬನ್ ಕೞ್ದೋನ್ ಮಹಾಪಾತಕನ್ ಸ್ವಸ್ತಿ 
ಭಟ್ಟರ್ಗ್ಗೀಗೞ್ದೆ ಒಡ್ಡಲಿಆ ಪತ್ತೊನ್ದಿ ವಿಟ್ಟಾರಕರ
ಹಲ್ಮಿಡಿ ಶಾಸನದ ತಿರುಳು ಹೀಗಿದೆ- ಮೊದಲೆರಡು ಸಾಲುಗಳಲ್ಲಿ ಅಚ್ಯುತನ ಧ್ಯಾನವನ್ನು ಹೇಳಲಾಗಿದೆ. "ಲಕ್ಷ್ಮಿಯೊಡನಿರುವ ಅಚ್ಯುತನು ಶ್ಯಾಙ್ಗ ವೆಂಬ ಬಿಲ್ಲನ್ನು ಬಗ್ಗಿಸಿ ಹಿಡಿದಿದ್ದು ದಾನವರಿಗೆ ಪ್ರಳಯ ಕಾಲದ ಅಗ್ನಿಯಂತೆಯೂ ಸಜ್ಜನರಿಗೆ ಸುದರ್ಶನ ಚಕ್ರದಂತೆಯೂ ತೋರುತ್ತಾನೆ " . ನಂತರದ ಸಾಲುಗಳು ರಾಜನಿಗೆ ನಮನಗಳನ್ನು ಸಲ್ಲಿಸಿ, ಅಲ್ಲಿ ನಡೆದ ಘಟನಾವಳಿಯನ್ನು ತೆರೆದಿಡುತ್ತದೆ. " ಕದಂಬರಾಜ, ತ್ಯಾಗಸಂಪನ್ನ, ಕಲಭೋರನ ಶತ್ರು ಎಂದೆನಿಸಿರುವ ಕಕುಸ್ಥ(ತ್ಸ) ಭಟ್ಟೋರಕನು ಆಳುತ್ತಿದ್ದ ಕಾಲ. ಅವನ ಅಧೀನದಲ್ಲಿ ’ನರಿದಾವಿಳೆ ನಾಡಿನಲ್ಲಿ’ ( ಇಲ್ಲಿಯ ಸುತ್ತಲಿನ ಒಟ್ಟು ಪ್ರದೇಶ) ಮೃಗೇಶ ಮತ್ತು ನಾಗ ಎಂಬ ಅಧಿಕಾರಿಗಳಿದ್ದರು. ಅವರು ಮೃಗರಾಜ ಮತ್ತು ಸರ್ಪರಾಜರಂತೆ ವೈರಿಗಳಿಗೆ ಭಯಂಕರರೆನಿಸಿದ್ದರು. ಇವರ ಅಧೀನದಲ್ಲಿ ’ಕೀರ್ತಿಗೊಂಡ ಭಟರಿ’ ವಂಶವೆಂಬ ನಿರ್ಮಲಆಕಾಶಕ್ಕೆ ಚಂದ್ರನಂತೆ ಹೊಳೆಯುವ ಪಶುಪತಿ ಎಂಬ ಹೆಸರಿನವನಿದ್ದ. ಅಳೂಪ ವಂಶ ಸಮೂಹಕ್ಕೆ ಇವನು ಶಿವ (ಪಶುಪತಿ) ನಂತಿದ್ದ. ಪ್ರಸಿದ್ದವಾದ ದಕ್ಷಿಣಾ ಪಥದಲ್ಲಿ ನೂರಾರು ಯುದ್ಧಗಳೆಂಬ ಯಙ್ಞ ಮಾಡಿ ಬಲಿದಾನ ಮಾಡಿ ಶೌರ್ಯ ತೋರಿದ್ದ. ದಾನ ಪಶುಪತಿ ಎಂದು ಹೊಗಳಲ್ಪಟ್ಟಿದ್ದ. ಅವನು ’ಸೇಂದ್ರಕರು’ ಮತ್ತು ’ಬಾಣರ’ ಸೈನ್ಯವನ್ನು ಸೇರಿಸಿಕೊಂಡು ಕೇಕಯ ಪಲ್ಲವರೆದುರು ಕದಂಬರ ಪರವಾಗಿ ಯುದ್ದಮಾಡಿ ಜಯ ತಂದುಕೊಟ್ಟ. ಅದಕ್ಕಾಗಿ ’ಸೇಂದ್ರಕ’ ಮತ್ತು ’ಬಾಣ’ ದೇಶದ ಜನರ ಸಮ್ಮುಖದಲ್ಲಿ ಪಲ್ಮಡಿ(ಹಲ್ಮಿಡಿ) ಯನ್ನೂ ಮೂಳಿವಳ್ಳಿ ( ಇಂದಿನ ಮುಗುಳುವಳ್ಳಿ) ಯನ್ನೂ ಅವನ ಅಧೀನಕ್ಕೆ ಪ್ರೀತಿ ಪೂರ್ವಕವಾಗಿ ಕೊಡಲಾಯಿತು. ಇದು ವೀರನ ಕತ್ತಿ ತೊಳೆದು ವೀರದಾನ ಕೊಡುವ ಸಮಾರಂಭವಾಗಲು ನಾಡ ಅಧಿಕಾರಿಗಳಾದ ಶ್ರೀ ಮೃಗೇಶ ಮತ್ತು ನಾಗ ಅವರುಗಳು ಹಾಜರಿದ್ದು ಆ ಗ್ರಾಮಗಳನ್ನು ವಿಜಯಿಗೆ ನೀಡಿದರು. ಈ ದಾನವನ್ನು ಕದ್ದವನಿಗೆ ಪಾಪ ಬರುತ್ತದೆ. ಸೈನ್ಯದ ತೆರಿಗೆ ಅಧಿಕಾರಿಗಳಾಗಿದ್ದ ಮೃಗೇಶ ಮತ್ತು ನಾಗರು ಹಲ್ಮಿಡಿಯ ’ಕುರುಬ’ರಿಗೆ ಪ್ರೀತಿಯಿಂದ ತೆರಿಗೆ ವಿನಾಯಿತಿಯಾದ ’ಕುರುಂಬಿಡಿ’ ಯನ್ನು ಬಿಟ್ಟರು. ಇದನ್ನು ಕೆಡಿಸಿದವನಿಗೆ ಮಹಾಪಾತಕವು ಉಂಟಾಗುತ್ತದೆ. " ಎಂದು ಬರೆಸಲಾಗಿದೆ. ಮುಂದೆ ಎಡಪಕ್ಕದಲ್ಲಿ ಇನ್ನೊಂದು ಸಾಲನ್ನು ಬರೆದಿದ್ದಾರೆ. ಅದು ಹೀಗಿದೆ.. " ಇಲ್ಲಿನ ಗದ್ದೆಯ ಉತ್ಪನ್ನದಲ್ಲಿ ಭಟ್ಟರಿಗೆ (ಬ್ರಾಹ್ಮಣರಿಗೆ) ಹತ್ತನೆಯ ಒಂದು ಭಾಗದ ತೆರಿಗೆ ವಿನಾಯಿತಿಯನ್ನು ಕೊಟ್ಟರು " . ಇದು ಈ ಶಾಸನದ ತಿರುಳು.









  
  ನಮಃ ಶ್ರೀಮ  ತ್ಕ ದಂಬ ಪನ್ತ್ಯಾಗ  ಸಂ ಪನ್ನ ನ್ಕಲ ಭೋರನಾ ಅ ರಿಕ 


       ಕುಸ್ಥುಭಟ್ಟೋರ  ನಾಳೆ   ನರಿ ದಾವಿಳೆ   ನಾಡುಳ್‌ ಮೃಗೇಶ  ನಾ
  

      ಗೇನ್ದ್ರಾ    ಭೀಳರ್ಭ್ಭಟ     ಹರಪ್ಪೊರ್ ಶ್ರೀ  ಮೃಗೇಶ ನಾ ಗಾ ಹ್ವ  ಯ


    ರಿರ್ವರಾ ಬ ಟ  ರಿ  ಕು ಲಾ ಮ ಲ  ವ್ಯೋಮ ತಾರಾಧಿನಾಥನ್ನ ಳ ಪ

    ಗ ಣ  ಪ  ಶು   ಪ ತಿ ಯಾ  ದ ಕ್ಷಿ ಣಾ  ಪಥ ಬ ಹು        ಶ  ತ  ಹ  ವ ನಾ


 ಹ  ವ ದು ಳ್    ಪಶು ಪ್ರದಾನ  ಶೌರ್ಯೋ  ದ್ಯ  ಮ    ಭರಿತೋನ್ದಾ ನ  ಪ

ಶು   ಪ  ತಿ   ಯೆ  ನ್ದು     ಪೊ  ಗ ೞೆ     ಪ್ಪೊ     ಟ್ಟ  ಣ     ಪ   ಶು    ಪ  ತಿ


  ನಾಮ   ಧೇಯ   ನಾ  ಸ ರ  ಕ್ಕೆ  ಲ್ಲ  ಭ      ಟ ರಿ  ಯಾ ಪ್ರೇಮಾ ಲ  ಯ


        ಸು  ತ  ನ್ಗೆ  ಸೇನ್ದ್ರಕ ಭ ಣೋದ ಯ  ದೇ ಶ ದಾ  ವೀರ ಪುರುಷ ಸಮಕ್ಷ


  ದೆ ಕೇ ಕ   ಯ  ಪ  ಲ್ಲ  ವ    ರಂ ಕಾದೆ  ರೆ  ದು ಪೆ   ತ್ತ ಜ ಯ  ನಾ   ವಿ ಜ


  ಅ  ರ  ಸ  ನ್ಗೆ    ಬಾ    ಳ್ಗ   ಚ್ಚು ಪ   ಲ್ಮಿ   ಡಿ ಉಂ ಮೂೞು ವ    ಳ್ಳಿ ಯಂ  ಕೊ


     ಟ್ಟಾರ್ ಭಟಾರಿ   ಕುಲದೊನಳುಕದಮ್ಬನ್ಕಳ್ದೋನ್ ಮಹಾಪಾತಕನ್



        ಇ ರ್ವ್ವರುಂ   ಸ ಳ್ಬಙ್ಗದರ್‌ ವಿಜಾರರಂ  ಪ  ಲ್ಮ      ಡಿ ಗೆ  ಕು ರು




       ಮ್ಬಿಡಿವಿಟ್ಟಾರ್‌ಅ ದಾ  ನ   ಳಿ  ವೊ      ನ್ಗೆ ಮಹಾಪಾತಕಂ ಸ್ವಸ್ತಿ



                                 (ಇಧೇ ಶಾಸನದ ಎಡಭಾಗದಲ್ಲಿರುವ ಪಾಠ )






ಭ ಟ್ಟ ರ್ಗ್ಗೀಗ  ೞ್ದೆ                ಒಡ್ಡಲಿ            ಆ ಪ  ತ್ತೊ ನ್ದಿ  ವಿಟ್ಟಾರಕರ


ಆಧಾರ
೧.ಕನ್ನಡ ಲಿಪಿ ಉಗಮ ಮತ್ತು ವಿಕಾಸ -  . ಡಾ. ಎ.ವಿ.ನರಸಿಂಹ ಮೂರ್ತಿ
೨. ಲಿಪಿಯ ಹುಟ್ಟು ಮತ್ತು ಬೆಳವಣಿಗೆ  - ಡಾ. ದೇವರ ಕೊಂಡಾರೆಡ್ಡಿ
೩.ಕನ್ನಡ ಲಿಪಿ ವಿಕಾಸ - ಡಾ.ಎಂ.ಜಿ. ಮಂನಜುನಾಥ ಮತ್ತು ಡಾ. ದೇವರಾಜ ಸ್ವಾಮಿ
೪. ಅಶೋಕನ ಶಾಸನಗಳು- ನಾ. ಕಸ್ತೂರಿ
೫.ಲಿಪಿಶಾಸ್ತ್ರ ಪ್ರವೇಶ- ಡಾ.ಮಾಧವ ನಾ. ಕಟ್ಟಿ
೬.ಭಾಷಾವಿಜ್ಞಾನದ ಮೂಲತತ್ವಗಳು- ಡಾ.ಎಂ. ಚಿದಾನಂದ ಮೂರ್ತಿ
೭. ಎಪಿಗ್ರಾಫಿಯಾ ಕರ್ನಾಟಕ ಸಂಪುಟಗಳು-ಬಾ.ರಾ. ಗೋಪಾಲ ಮೈಸೂರುವಿಶ್ವವಿದ್ಯಾಲಯ
೮. The Alphabet-Devid deringer.
೯. Elements  of south Indian Paleography-A.C. Burnel
೧೦ ಅಂತರ್‌ಜಾಲತಾಣಗಳು.













ಆ ಪತ್ತೊನ್ದಿ ವಿಟ್ಟಾರಕರ